Windows 10 Support

ನಾನು microsoft edgeನಲ್ಲಿ ವೆಬ್‌ಸೈಟ್ ನಂಬಲರ್ಹವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ

ನಾನು Microsoft Edgeನಲ್ಲಿ ವೆಬ್‌ಸೈಟ್ ನಂಬಲರ್ಹವೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

ನಿಮಗೆ Microsoft Edge ನಲ್ಲಿ ವೆಬ್‌ಸೈಟ್ ವಿಳಾಸದ ಮುಂದೆ ಲಾಕ್ ಬಟನ್ ಕಂಡರೆ, ಅದರರ್ಥ:
ನೀವು ವೆಬ್‌ಸೈಟ್‌ನಿಂದ ಏನೆಲ್ಲಾ ಕಳುಹಿಸಿರುವಿರೋ ಮತ್ತು ಸ್ವೀಕರಿಸಿರುವಿರೋ ಅದನ್ನು ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ, ಈ ಮಾಹಿತಿಯನ್ನು ಪ್ರವೇಶಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.


ವೆಬ್‌ಸೈಟ್ ಪರಿಶೀಲಿಸಲಾಗಿದೆ, ಅಂದರೆ ಕಂಪನಿಯು ಚಲಾಯಿಸುತ್ತಿರುವ ಸೈಟ್ ಪ್ರಮಾಣಪತ್ರವನ್ನು ಹೊಂದಿದ್ದು, ಅದು ಕಂಪನಿಯ ಸ್ವಂತದ್ದು ಎಂಬುದನ್ನು ಸಾಬೀತುಪಡಿಸುತ್ತದೆ ಎಂದರ್ಥ. ಸೈಟ್ ಮಾಲೀಕರು ಯಾರು ಮತ್ತು ಅದನ್ನು ಪರಿಶೀಲಿಸಿರುವವರು ಯಾರು ಎಂಬುದನ್ನು ನೋಡಲು ಲಾಕ್ ಬಟನ್ ಕ್ಲಿಕ್ ಮಾಡಿ.
ಬೂದು ಬಣ್ಣದ ಲಾಕ್ ಎಂದರೆ ವೆಬ್‌ಸೈಟ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ಖಚಿತಪಡಿಸಿಕೊಳ್ಳಲಾಗಿದೆ, ಹಸಿರು ಬಣ್ಣದ ಲಾಕ್ ಎಂದರೆ ವೆಬ್‌ಸೈಟ್ ವಿಶ್ವಾಸಾರ್ಹವಾಗಿರುವ ಹೆಚ್ಚಿನ ಸಾಧ್ಯತೆ ಎಂದು Microsoft Edge ಪರಿಗಣಿಸುತ್ತದೆ ಎಂಬುದಾಗಿ ಅರ್ಥ. ಅದು ವಿಸ್ತೃತ ದೃಢೀಕರಣದ (EV) ಪ್ರಮಾಣಪತ್ರವನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ, ಇದಕ್ಕೆ ಹೆಚ್ಚು ಕಠಿಣ ಗುರುತಿಸುವಿಕೆ ಪರಿಶೀಲನೆ ಪ್ರಕ್ರಿಯೆಯ ಅಗತ್ಯವಿರುತ್ತದೆ.

Exit mobile version