ಅಲಾರಂಗಳು & ಗಡಿಯಾರದ ಅಪ್ಲಿ ಬಳಸುವುದು ಹೇಗೆ
ಅಲಾರಂಗಳನ್ನು ವಜಾಗೊಳಿಸಿ ಅಥವಾ ಸ್ನೂಜ್ ಮಾಡಿ
ಅಪ್ಲಿ ಮುಚ್ಚಿರುವಾಗ, ಧ್ವನಿ ಮ್ಯೂಟ್ ಮಾಡಿರುವಾಗ, ನಿಮ್ಮ PC ಲಾಕ್ ಆಗಿರುವಾಗ, ಅಥವಾ (InstantGo ಸ್ಥಾಪಿಸಲಾಗಿರುವ ಕೆಲವು ಹೊಸ ಲ್ಯಾಪ್‌ಟಾಪ್‌ಗಳು ಅಥವಾ ಟ್ಯಾಬ್ಲೆಟ್‌ಗಳಲ್ಲಿ), ಸ್ಲೀಪ್ ಮೋಡ್‌ನಲ್ಲಿರುವಾಗಲೂ ಅಲಾರಂಗಳು ಧ್ವನಿಯನ್ನು ಹೊರಡಿಸುತ್ತವೆ.
ಆದರೆ ನಿಮ್ಮ PC ನಿಷ್ಕ್ರಿಯವಾಗಿರುವಾಗ ಅಥವಾ ಆಫ್ ಆಗಿರುವಾಗ ಅವುಗಳು ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ PC ನಿಷ್ಕ್ರಿಯವಾಗದಂತೆ ತಡೆಯಲು ಅದನ್ನು AC ಪವರ್‌ಗೆ ಪ್ಲಗ್ ಇನ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಅಲಾರಂ ಸ್ನೂಜ್ ಅಥವಾ ವಜಾಗೊಳಿಸಲು:
ಪಾಪ್ ಅಪ್ ಆಗುವ ಅಧಿಸೂಚನೆಯಲ್ಲಿ, ಅದನ್ನು ಆಫ್ ಮಾಡಲು ವಜಾಗೊಳಿಸು ಆಯ್ಕೆಮಾಡಿ ಇಲ್ಲವೇ ಸ್ವಲ್ಪ ಸಮಯದ ಬಳಿಕ ಮತ್ತೊಮ್ಮೆ ಧ್ವನಿ ಹೊರಡಿಸುವಂತೆ ಸ್ನೂಜ್ ಮಾಡಿ.
ನೀವು ಪ್ರವೇಶಿಸುವುದಕ್ಕೂ ಮೊದಲು ಅಧಿಸೂಚನೆ ಮುಚ್ಚಿ ಹೋದರೆ, ಅದು ಪಟ್ಟಿಯಲ್ಲಿದೆಯೇ ಎಂದು ನೋಡಲು ಕೆಳಗಿನ ಬಲ ಮೂಲೆಯಲ್ಲಿರುವ ಕ್ರಿಯೆ ಕೇಂದ್ರದ ಐಕಾನ್ ಆಯ್ಕೆಮಾಡಿ ಮತ್ತು ಅಲ್ಲಿಂದ ಅದನ್ನು ಆಯ್ಕೆಮಾಡಿ.
ನಿಮ್ಮ ಪರದೆ ಲಾಕ್ ಆದರೆ, ಲಾಕ್ ಪರದೆಯ ಮೇಲ್ಭಾಗದಲ್ಲಿ ಅಲಾರಂ ಅಧಿಸೂಚನೆ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅಲ್ಲಿಂದಲೇ ಅದನ್ನು ಆಫ್ ಮಾಡಬಹುದು.
ಹೊಸತೇನಿದೆ
ಅಲಾರಂಗಳು & ಗಡಿಯಾರದ ಅಪ್ಲಿಯು ಜಾಗತಿಕ ಗಡಿಯಾರಗಳು, ಟೈಮರ್ ಮತ್ತು ಸ್ಟಾಪ್‌ವಾಚ್ ಒಳಗೊಂಡ ಅಲಾರಂ ಗಡಿಯಾರದಿಂದ ಸಂಯೋಜಿತವಾಗಿದೆ. ಈ ಅಪ್ಲಿಯನ್ನು ನೀವು ಕೈಗೊಳ್ಳಬಹುದಾದ ಕೆಲವು ಸಂಗತಿಗಳು ಇಲ್ಲಿವೆ:
ಪರದೆ ಲಾಕ್ ಆಗಿದ್ದರೂ ಅಥವಾ ಧ್ವನಿಯನ್ನು ಮ್ಯೂಟ್ ಮಾಡಿದ್ದರೂ ಅಲಾರಂಗಳನ್ನು ಆಲಿಸಿ, ಸ್ನೂಜ್ ಮಾಡಿ ಮತ್ತು ವಜಾಗೊಳಿಸಿ
ಅಲಾರಂಗೆ ವಿವಿಧ ಧ್ವನಿಗಳನ್ನು ಅಥವಾ ನಿಮ್ಮ ಸ್ವಂತದ ಸಂಗೀತವನ್ನು ಆರಿಸಿಕೊಳ್ಳಿ
ಜಾಗತಿಕ ಸಮಯಕ್ಕೆ ಸಮಯಗಳನ್ನು ಹೋಲಿಸಿ ನೋಡಿ
ಜಾಗತಿಕ ಗಡಿಯಾರಗಳು
ಸ್ಥಳವನ್ನು ಸೇರಿಸುವುದು ಮತ್ತು ಜಗತ್ತಿನ ಬೇರೆ ಸಮಯಗಳಿಗೆ ಸಮಯವನ್ನು ಹೋಲಿಸಿ ನೋಡುವುದು ಹೇಗೆ ಎಂಬುದು ಇಲ್ಲಿದೆ:
ಅಲಾರಂಗಳು & ಗಡಿಯಾರ ಅಪ್ಲಿಯಲ್ಲಿ, ಜಾಗತಿಕ ಗಡಿಯಾರ ಆಯ್ಕೆಮಾಡಿ, ನಂತರ ಕೆಳಭಾಗದಲ್ಲಿ ಹೊಸದು + ಆಯ್ಕೆಮಾಡಿ.
ನೀವು ಬಯಸುವ ಸ್ಥಳದ ಮೊದಲ ಕೆಲವು ಅಕ್ಷರಗಳನ್ನು ನಮೂದಿಸಿ, ತದನಂತರ ಡ್ರಾಪ್‌ಡೌನ್ ಪಟ್ಟಿಯಲ್ಲಿ ಅದನ್ನು ಆಯ್ಕೆಮಾಡಿ. ನೀವು ಬಯಸಿದ ಸ್ಥಳ ನಿಮಗೆ ಕಾಣಿಸದಿದ್ದರೆ, ಅದೇ ಸಮಯ ವಲಯದಲ್ಲಿ ಬರುವ ಬೇರೊಂದು ಸ್ಥಳವನ್ನು ನಮೂದಿಸಿ.
ಸಮಯಗಳನ್ನು ಹೋಲಿಸಿ ಆಯ್ಕೆಮಾಡಿ (ಕೆಳಭಾಗದಲ್ಲಿರು 2 ಗಡಿಯಾರಗಳು), ತದನಂತರ ಹೋಲಿಸಿ ನೀಡಬೇಕಿರುವ ಹೊಸ ಸಮಯವನ್ನು ಆಯ್ಕೆ ಮಾಡಲು ಸ್ಲೈಡರ್ ಸರಿಸಿ. ಸ್ಲೈಡರ್ ಯಾವ ಸ್ಥಳವನ್ನು ಉಲ್ಲೇಖಿಸುತ್ತಿದೆ ಎಂಬುದನ್ನು ಬದಲಿಸಲು ನಕ್ಷೆಯಲ್ಲಿ ಸ್ಥಳವನ್ನು ಆಯ್ಕೆಮಾಡಿ.
ಸಮಯಗಳನ್ನು ಹೋಲಿಸಿ ಮೋಡ್‌ನಿಂದ ನಿರ್ಗಮಿಸಲು, ಹಿಂದಕ್ಕೆ ಬಟನ್ ಆಯ್ಕೆಮಾಡಿ ಅಥವಾ Esc ಒತ್ತಿರಿ.